Monday, November 30, 2009

ಮುಗಿಲ ಸೊಬಗು.

















ಆಹಾ... ಏನಿದೂ..ಸೊಬಗು ಮುಗಿಲಿನಾ ಬೆಳ್ಗೊಡೆ,
ಬನ ಬನಗಳಲೂ ತಳಿರುಡುಗೆ ಹನಿಯಾಗಿ ಸುರಿದೊಡೆ;
ಸುಳಿಗುರುಳು ನಗೆಗನ್ನು ಅರಳಿಸುತ ನಕ್ಕು ಬಿಡೆ,
ವಸುಧೆಯಾ ಹೂಬನಕೆ ತನಿರಸವ ಕುಡಿಸಿಬಿಡೆ;
ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;
.....ಮುಗಿಲೆ ನಿನ್ನೊಲವೆ ಭುವಿಗೆ ನಲಿವೂ...,
ಬೆಳೆಯ ಉಸಿರಿಗೆ ನೀನೆಂದೂ ಜೀವ ಜಲವೂ...;
ನೀ ಒಲಿದರೇ..... ವಸುಮತಿಗೆ ವೈಭವವೂ,
ನೀ ಮುನಿದರೆ ಬಾಡಿ ಹೋಗುವುದೀ ಚೇತನವು!

.




6 comments:

  1. Waaw superb:):) really very nice poem:)

    Hareesha SK

    ReplyDelete
  2. Hi, Can you do English to Kannada translation work from home? If interested, write to: translation.digantha@gmail.com

    ReplyDelete
  3. ತುಂಬಾ ಚೆನ್ನಾಗಿದೆ
    ಫೋಟೋದೊಂದಿಗೆ ಕವಿತೆ ಇನ್ನೂ ಸುಂದರ

    ReplyDelete
  4. ಪ್ರಮೀಳಾವ್ರೇ...ಮೊದಲಿಗೆ ಸೊಗಸನ್ನು ಸೇರಿಸಿ ಪ್ರಾಸಕ್ಕೆ ಹೊಂದಿಸಿ ಉತ್ತಮ ಕವನದ ರಚನೆಗೆ..ಅಭಿನಂದನೆಗಳು...ಪ್ರಕೃತಿಯ ಸೊಬಗನ್ನು ಚನ್ನಾಗಿಯೇ ವರ್ಣಿಸಿದ್ದೀರ...

    ReplyDelete
  5. ಕವನ ಬಹಳ ಸು೦ದರವಾಗಿದೆ.
    ಈ ಸಾಲುಗಳು ಬಹಳ ಚನ್ನ.

    ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
    ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
    ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
    ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;

    ReplyDelete