
ಆಹಾ... ಏನಿದೂ..ಸೊಬಗು ಮುಗಿಲಿನಾ ಬೆಳ್ಗೊಡೆ,
ಬನ ಬನಗಳಲೂ ತಳಿರುಡುಗೆ ಹನಿಯಾಗಿ ಸುರಿದೊಡೆ;
ಸುಳಿಗುರುಳು ನಗೆಗನ್ನು ಅರಳಿಸುತ ನಕ್ಕು ಬಿಡೆ,
ವಸುಧೆಯಾ ಹೂಬನಕೆ ತನಿರಸವ ಕುಡಿಸಿಬಿಡೆ;
ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;
ಓ.....ಮುಗಿಲೆ ನಿನ್ನೊಲವೆ ಭುವಿಗೆ ನಲಿವೂ...,
ಬೆಳೆಯ ಉಸಿರಿಗೆ ನೀನೆಂದೂ ಜೀವ ಜಲವೂ...;
ನೀ ಒಲಿದರೇ..... ವಸುಮತಿಗೆ ವೈಭವವೂ,
ನೀ ಮುನಿದರೆ ಬಾಡಿ ಹೋಗುವುದೀ ಚೇತನವು!
.
Waaw superb:):) really very nice poem:)
ReplyDeleteHareesha SK
Hi, Can you do English to Kannada translation work from home? If interested, write to: translation.digantha@gmail.com
ReplyDeleteತುಂಬಾ ಚೆನ್ನಾಗಿದೆ
ReplyDeleteಫೋಟೋದೊಂದಿಗೆ ಕವಿತೆ ಇನ್ನೂ ಸುಂದರ
ಪ್ರಮೀಳಾವ್ರೇ...ಮೊದಲಿಗೆ ಸೊಗಸನ್ನು ಸೇರಿಸಿ ಪ್ರಾಸಕ್ಕೆ ಹೊಂದಿಸಿ ಉತ್ತಮ ಕವನದ ರಚನೆಗೆ..ಅಭಿನಂದನೆಗಳು...ಪ್ರಕೃತಿಯ ಸೊಬಗನ್ನು ಚನ್ನಾಗಿಯೇ ವರ್ಣಿಸಿದ್ದೀರ...
ReplyDeleteGood retreat !
ReplyDeleteಕವನ ಬಹಳ ಸು೦ದರವಾಗಿದೆ.
ReplyDeleteಈ ಸಾಲುಗಳು ಬಹಳ ಚನ್ನ.
ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;