Thursday, April 8, 2010

ಕಂದಾ...



ನಗುತಲಿರು ಕಂದಾ...
ಹೀಗೆಯೇ ಎಂದೆಂದೂ....,
ಹೆತ್ತವರ ಒಡಲನು ತಂಪಾಗಿಸು ಎಂದೂ....;
ಜಲಧಿಯಂತೇ ಶುದ್ಧ ಪರಿಶುದ್ಧ ಎಳೆ ಮನಸು,
ನನಸಾಗಲಿ ನಿನ್ನ ಒಡಲಾಳದ ಕನಸು!
ಮುಗ್ಧ ನಗು ಮುಗ್ಧ ಮಗು,
ನೀ ಸಾಧನೆಯ ಹಾದಿಯಲಿ,
ಸಫಲತೆಯ ಪಡೆಯುತಲಿ;
ಬೆಳೆದು ಉಜ್ವಲಿಸುತಲಿ ಮುಂದೆ ಸಾಗೂ...!