Thursday, November 19, 2009

ಗುಲಾಬಿ

ಹೂವ ಲೋಕದ ರಾಣೀ....,
ಅರೆ ಬಿರಿದು ನಗುತಿರುವೆ;
ಮುಳ್ಳು ಗಿಡದಲಿ ಅರಳಿ ನೀ....,
ಕಂಪು ಬೀರುತಲಿರುವೆ;
ಭಾವ ಲೋಕದ ಹೂ ಬನದ ಚೆಲುವೇ,
ನೆಟ್ಟಿರುಳು ಮೊಗ್ಗರಳಿ ನಿಂತಿರುವೆ;
ಎಲ್ಲ ಕಂಗಳ ಸೆಳೆದು ಪರಿಮಳವ ಪಸರಿಸುವೆ,
ಕೀಳದಿರಿ ಎನ್ನ ನಾ ಧರೆಯ ಸಿರಿ ಎನುವೇ....!





3 comments:

  1. ಗುಲಾಬಿಯ "ಸ್ವಗತ" ಸುಂದರವಾಗಿದೆ...

    ReplyDelete
  2. ಭಾವ ಲೋಕದ ಹೂ ಬನದ ಚೆಲುವೇ,
    ಪದಗಳು ತು೦ಬ ಸು೦ದರವಾಗಿದೆ

    ReplyDelete