ತಾಯಿ ಮಮತೆ
ಅಂದು ನಾನಾಗಿದ್ದೆ ,
ಪುಟ್ಟ ಸುಂದರ ಹಕ್ಕಿ;
ಹಾರಲಾರದೆ ಎಡವಿದ್ದೆ,
ತಾಯ ಬಳಿ ದುಖವುಕ್ಕಿ !
ಅಂದು ನಾನಾಗಿದ್ದೆ ,
ಪುಟ್ಟ ಸುಂದರ ಹಕ್ಕಿ;
ಹಾರಲಾರದೆ ಎಡವಿದ್ದೆ,
ತಾಯ ಬಳಿ ದುಖವುಕ್ಕಿ !
ರೆಕ್ಕೆ ಪುಕ್ಕವು ಬಲಿತು,
ಹಾರುವುದ ನಾ ಕಲಿತೆ;
ಬೆಳ್ಮುಗಿಲಿನೊಳು ಬೆರೆತು,
ತಾಯಿ ಮಮತೆಯ ಮರೆತೆ;
ದೂರ ಗಗನದ ನಾಡು;
ನೋವು ನುಂಗಿದ ನಗುವು,
ತಾಯಿ ಒಡಲಿನ ಹಾಡು;
ಯಾಕೆ ಕೊರಗುವೆಯಂತೆ,
ನಿನಗಿರಲಿ ನಿಶ್ಚಿಂತೆ;
ಹಾರುವಾಸೆಗೆ ಗರಿಯಾಗು,
ನೋಡು ಲೋಕದ ಬೆಡಗು;
ಪ್ರುಥ್ವಿಯಿಂದಾಗಸಕೆ,
ನೀಲಿ ಗಗನದಿ ಪಯಣ;
ನೊಂದ ತಾಯಿಯ ಮನ,
ಮಿಡಿಯಿತು ಅಂಥಕರಣ;
ಬಾಳ ಸವಿಗೊಂದೆ ಕುಡಿ,
ಕಳಚಿ ಹೋಯಿತು ಕೊಂಡಿ;
ಎಂದೆನುತ ಮರುಗದಿರು,
ನೀನಿಲ್ಲದೆನಗಾರು;
ಪ್ರೀತಿ ಅರಳಿಸಿ ನಗುವ,
ಕರೆಯೆ ಮರೆಯಿಸಿತಮ್ಮ;
ಭಾವದೊರತೆಯ ಜೀವ,
ಮೇರೆ ಮೀರಿತು ಅಮ್ಮ;
ತಾಯಿ ಮಗುವಿನ ಮೈತ್ರಿ,
ಜನ್ಮ ಜನ್ಮದ ಬಂಧ;
ನೆನೆಯುವೆನು ದಿನರಾತ್ರಿ,
ನಾನೆಂದೂ ನಿನ ಕಂದ!
..............................................................................................................................................................
No comments:
Post a Comment