Tuesday, March 9, 2010

ಹೊಸ ಬಾಳಿನ ಹಾಡು

ಸವಿಗನಸಿನ ಹೊಂಬಯಕೆಯ ನವರಸವನು ಬೀರೀ...,
ಹೊಸಬಾಳಿನ ತಂಗಾಳಿಗೆ ಸಂಪ್ರೀತಿಯ ತೋರೀ...;
ಮಿಂಚುತಲಿದೆ ಸೌಂದರ್ಯದ ನಗೆಕಣ್ಣಿನ ಕಾಂತೀ...,
ಚಿಮ್ಮುತಲಿದೆ ನವಜೀವನದುಸಿರಿನ ಸುಖ ಶಾಂತೀ...;
ಹೊಸ ಹಗಲಿನ ತೇರೆಳೆಯುತ ಉಲ್ಲಾಸದ ನಗುವೂ..,
ಹೂವಾಗೀ ಅರಳುತಲಿದೆ ಮುಗ್ಧ ಮೊಗದ ಚೆಲುವೂ...;
ತಿರುತಿರುಗುತ ಅರಸುತಲಿದೆ ಆಂತರ್ಯದ ಒಲವೂ...,
ಕೆಂದಾವರೆ ಮನವರಳಿದೆ ಮುನ್ನಡೆಯುವ ಛಲವೂ...;
ಉಕ್ಕೇರಲಿ ಜೀವನದಲಿ ಅನುರಾಗದ ಸುಧೆಯೂ...,
ಇಂಪಾಗಿಹ ಹಾಡಾಗಲಿ ಮನದ ಸ್ಪೂರ್ತಿ ಸೆಲೆಯೂ...!

4 comments:

  1. ವವ್
    ಎಷ್ಟು ಚೆನ್ನಾಗಿದೆ ಇದು
    ಯಾವುದೋ ರಾಗಕ್ಕೆ ಒಪ್ಪುವಂತಿದೆ
    ಕುವೆಂಪು ಅವರು ಬರೆದ ಕವನ ನೆನಪಾಯಿತು ಇದನ್ನು ಓದಿ

    ReplyDelete
  2. good poem madom.:) tumba tumba tadavaagi happy ugaadi:)

    ReplyDelete
  3. ಹೊಸ ಬಾಳಿನ ಹಾಡಿನಲ್ಲಿ ಚಲುವಿದೆ,ಒಲವಿದೆ,ಮುಗ್ದತೆಯಿದೆ,
    ಚೈತನ್ಯದ ಛಲವಿದೆ,ಉತ್ಸಾಹದ ನಗುವಿದೆ, ಉಲ್ಲಾಸದ ನಲಿವಿದೆ.
    ಬರವಸೆಯ ಚಿಗುರಿದೆ.

    ReplyDelete
  4. ತುಂಬಾ ಒಳ್ಳೆದಾಯಿದು.
    ಆನು ಇಂದು ಓದಿದ್ದು.ಹಾಂಗಾಗಿ ಈಗ ಹೇಳ್ತಾ ಇದ್ದೆ ಆತಾ.

    ReplyDelete